ಟೈಪಿಂಗ್ ಕೆಲಸಕ್ಕೆ ಸೀಮಿತಗೊಳಿಸಿ ಕಂಪ್ಯೂಟರ್‌ನ್ನು ಇಂದಿಗೂ ಕೇವಲ ‘ ಆಧುನಿಕ ಟೈಪ್‌ರೈಟರ್ ’ ನಂತೆ (ಗ್ಲೋರಿಫೈಡ್ ಟೈಪ್‌ರೈಟರ್) ಬಳಸಲಾಗುತ್ತಿದೆ ಎಂಬುದು ಅತಿಶಯೋಕ್ತಿಯಲ್ಲ. ಇಂಗ್ಲಿಷ್ ಭಾಷೆಗೆ ಕ್ವೆರ್ಟಿ (ಕಿ W ಇಖಖಿಙ) ಕೀಲಿಮಣೆ (ಕೀ-ಬೋರ್ಡ್) ವಿನ್ಯಾಸವು ಏಕೈಕ ಸ್ಟ್ಯಾಂಡರ್ಡ್ ವಿನ್ಯಾಸವಾಗಿ ಬಳಕೆಗೆ ಬಂದು ದಶಕಗಳೇ ಸಂದಿವೆ. ಇಂಗ್ಲಿಷೇತರ ಭಾಷೆಯ ಕಂಪ್ಯೂಟರ್ ಟೈಪಿಂಗ್‌ಗಾಗಿ ವಿವಿಧ ಕಾಲಘಟ್ಟದಲ್ಲಿ , ವಿವಿಧ ರೀತಿಯ ಬಳಕೆಕಾರರಿಗೆ ಅಗತ್ಯವಿದ್ದ , ವಿವಿಧ ವಿನ್ಯಾಸದ ಕೀಲಿಮಣೆಗಳನ್ನು ರೂಪಿಸಿ ತಂತ್ರಾಂಶಗಳಲ್ಲಿ ಅಳವಡಿಸುತ್ತಾ ಬರಲಾಗಿದೆ. ಕೇವಲ ೨೬ ಅಕ್ಷರಗಳು ಇರುವ ಇಂಗ್ಲಿಷ್‌ನ ಪಠ್ಯವನ್ನು ಕಂಪ್ಯೂಟರ್‌ಗೆ ಊಡಿಸಲು ಕ್ವೆರ್ಟಿ ( QWERTY ) ಕೀಲಿಮಣೆ ಬಹಳ ಜನಪ್ರಿಯವಾಗಿದೆ. ಶಿಫ್ಟ್‌ಸಹಿತ ಮತ್ತು ಶಿಫ್ಟ್‌ರಹಿತ ಬಳಕೆಯಿಂದ ೫೨ ಸಾಧ್ಯತೆಗಳು ದೊರೆಯುತ್ತವೆ. ಇದರಿಂದ ಇಂಗ್ಲಿಷ್‌ನ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್‌ಗಳ ಪಠ್ಯ ಮೂಡಿಸಲು ಸಾಧ್ಯವಾಗಿದೆ. ಇಂಗ್ಲಿಷ್‌ಗಿಂತ ಹೆಚ್ಚಿನ ಸಂಖ್ಯೆಯ ಮೂಲ ಅಕ್ಷರಗಳು , ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳಿರುವ ಭಾರತೀಯ ಭಾಷೆಗಳನ್ನೂ ಸಹ ಕಂಪ್ಯೂಟರ್‌ಗೆ ಊಡಿಸುವಲ್ಲಿ ಇದೇ ಕೀಲಿಮಣೆಯು ಬಳಕೆಯಲ್ಲಿರುವುದು ಆಶ್ಚರ್ಯದ ವಿಷಯವೇನಲ್ಲ. ಸ್ವರಗಳು ಮತ್ತು ವ್ಯಂಜನಗಳು ತಾವಾಗಿಯೇ ಸೇರ್ಪಡೆಗೊಂಡು ಗುಣಿತಾಕ್ಷರವಾಗುಂತೆ ಸಂಯೋಜನಾ ತಂತ್ರವನ್ನು ರೂ...