‘ ಪದ ’ ತಂತ್ರಾಂಶವನ್ನು ಅನುಸ್ಥಾಪಿಸಿಕೊಂಡು ಬಳಸುವಲ್ಲಿ ನೀವು ಯಶಸ್ವಿಯಾಗಿದ್ದರೆ , ಅದು ನಿಜಕ್ಕೂ ಅಭಿನಂದನೀಯ. ಕೆಲವರು ಇನ್ನೂ ವಿಂಡೋಸ್ ಎಕ್ಸ್‌ಪಿ ಆಪರೇಟಿಂಗ್ ಸಿಸ್ಟಂ (ಓ.ಎಸ್.) ಅನ್ನು ಬಳಸುತ್ತಿರುವುದರಿಂದ ಅಂತಹ ಕಂಪ್ಯೂಟರುಗಳಲ್ಲಿ ‘ ಪದ ’ ತಂತ್ರಾಂಶವನ್ನು ಬಳಸಲು ಅನುವಾದಾಗ ಸಮಸ್ಯೆ ಕಂಡುಬಂದಿದೆ. ಟೈಪ್ ಮಾಡಿದಾಗ ಕನ್ನಡ ಅಕ್ಷರಗಳು ಮೂಡಿಬರುವ ಬದಲಾಗಿ. ಚಿಕ್ಕಚಿಕ್ಕ ಚೌಕಾಕಾರದ ಡಬ್ಬಿಗಳ ಸಾಲುಗಳು ಮೂಡಿಬರುತ್ತವೆ. ಕಂಪ್ಯೂಟರಿಗೆ ಅಕ್ಷರಗಳ ‘ ಎನ್‌ಕೋಡಿಂಗ್ ’ ಅರ್ಥವಾಗುತ್ತಿದೆ , ಆದರೆ , ಆ ಅಕ್ಷರಗಳನ್ನು ಪ್ರದರ್ಶಿಸಲು ‘ ಫಾಂಟ್ ’ ಇಲ್ಲ ಎಂದರ್ಥ. ಇದಕ್ಕೆ ತಕ್ಷಣದ ಪರಿಹಾರವೆಂದರೆ , ಂಡಿ i ಚಿಟ ಒ S U ಟಿ i ಛಿ o ಜ e ಫಾಂಟ್‌ನ್ನು ಆಯ್ಕೆ ಮಾಡಿಕೊಂಡು ಟೈಪ್‌ಮಾಡಬಹುದು. ಈ ಫಾಂಟ್ ನಿಮ್ಮ ಸಿಸ್ಟಂನಲ್ಲಿ ಇಲ್ಲವೆಂದಾದರೆ , ಇಂಟರ್‌ನೆಟ್‌ನಲ್ಲಿ ಹೋಗಿ ಈ ಫಾಂಟನ್ನು ಡೌನ್‌ಲೋಡ್ ಮಾಡಿಕೊಂಡು ವಿಂಡೋಸ್‌ನ ಫಾಂಟ್ ಫೋಲ್ಡರಿನಲ್ಲಿ ಕಾಪಿ ಮಾಡಬಹುದು. ‘ ತುಂಗಾ ’ ಯುನಿಕೋಡ್ ಫಾಂಟ್‌ನ್ನು ಸಹ ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ. ಆದರೆ , ತುಂಗಾ ಫಾಂಟು ಹಳೆಯ ಆವೃತ್ತಿಯದ್ದಾಗಿದ್ದರೆ ಮಾತ್ರ ಎಕ್ಸ್‌ಪಿ ಜೊತೆ ಅದು ಕೆಲಸ ಮಾಡುತ್ತದೆ ಹೊಸ ಆವೃತ್ತಿಯದ್ದಾದರೆ ಸಮಸ್ಯೆ ಮತ್ತಷ್ಟು ಬಿಗಡಾಯಿಸಬಹುದು. ವಿಂಡೋಸ್ ಎಕ್ಸ್‌ಪಿ ಮತ್ತು ತದನಂತರದ ಓ.ಎಸ್.ಗಳಲ್ಲಿ ಯುನಿಕೋಡ್ ಎನ್‌ಕೋ...