ನಾವು ಮಾತನಾಡುವ ಮತ್ತು ಬರೆಯುವ ಭಾಷೆಯ ಧ್ವನಿ ಮತ್ತು ಬರಹರೂಪಗಳನ್ನು ಸೃಷ್ಟಿಸುವುದು , ಗುರುತಿಸುವುದು , ದಾಖಲಿಸುವುದು ಮತ್ತು ವಿಶ್ಲೇಷಿಸುವುದು ಇತ್ಯಾದಿಗಳನ್ನು ಮಾಡುವ ಕಂಪ್ಯೂಟರ್ ವ್ಯವಸ್ಥೆಗಳ ಸಂಶೋಧನೆಯನ್ನು ‘ ಭಾಷಾ ತಂತ್ರಜ್ಞಾನ ’ ಎನ್ನಲಾಗಿದೆ. ಧ್ವನಿಸಂಸ್ಕರಣೆ (ಧ್ವನಿ ಗುರುತಿಸುವುದು ಮತ್ತು ಅರ್ಥೈಸುವುದು ಹಾಗು ವಿಶ್ಲೇಷಿಸುವುದು) , ಮಾಹಿತಿಯನ್ನು ಹೆಕ್ಕಿ ತೆಗೆಯುವುದು , ಕೈಬರಹ ಗುರುತಿಸುವುದು , ಯಂತ್ರ ಭಾಷಾಂತರ , ಪಠ್ಯ ಸಾರಾಂಶಗೊಳಿಸುವುದು ಮತ್ತು ಭಾಷಾ ಲಿಪಿಗಳನ್ನು ಮತ್ತು ಉಚ್ಚಾರಣೆಗಳನ್ನು ಸೃಷ್ಟಿಸುವುದು. - ಇವುಗಳು ಭಾಷಾ ತಂತ್ರಜ್ಞಾನದ ಪ್ರಮುಖವಾದ ಸಂಶೋಧನೆಗಳು. ಕಂಪ್ಯೂಟರ್ ವಿಜ್ಞಾನ ಮತ್ತು ಭಾಷಾಶಾಸ್ತ್ರ ಇವೆರಡರ ಸಮ್ಮಿಲನದಿಂದಾಗಿ ಇಂದು ‘ ಗಣನಾ ಭಾಷಾಶಾಸ್ತ್ರ ’ ( ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್) ಎಂಬ ಹೊಸ ಜ್ಞಾನಶಿಸ್ತು ಆರಂಭಗೊಂಡಿದೆ. ಕಂಪ್ಯೂಟರ್‌ಗಳ ಮೂಲಕ ಕೈಗೊಳ್ಳುವ , ಮಾನವ ಸಹಜ ಭಾಷೆಗಳ ಸರ್ವಸಾಮರ್ಥ್ಯದ ವಿವಿಧ ಆಯಾಮಗಳ ಗಣನಾಕಾರ್ಯವನ್ನು (ಕಂಪ್ಯೂಟಿಂಗ್) ‘ ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್ ’ ಎಂದು ಕರೆಯಾಗಿದೆ. ಮಾನವನ ಗ್ರಹಣಶಕ್ತಿ , ನೆನಪಿನಶಕ್ತಿ ಮತ್ತು ವಿವೇಚನಾಶಕ್ತಿಗಳ ರೀತಿಯಲ್ಲಿಯೇ , ಗಣನಕ್ರಿಯೆಗಳ ಮೂಲಕ , ಯಾಂತ್ರಿಕ ಮಾದರಿಗಳನ್ನು ತಯಾರಿಸುವ ಉದ್ದೇಶದ ಆರಂಭಗೊಂಡ ‘ ಕಂಪ್ಯೂಟೇಶನಲ್ ಲಿ...